ವರಮಹಾಲಕ್ಷ್ಮಿ ಹಬ್ಬವು ಶ್ರಾವಣ ಮಾಸದಲ್ಲಿ ಬರುವ ಒಂದು ಪ್ರಮುಖ ಹಬ್ಬ. ಈ ಹಬ್ಬವನ್ನು ವಿಶೇಷವಾಗಿ ಮುತ್ತೈದೆಯರು ಆಚರಿಸುತ್ತಾರೆ. Varamahalakshmi festival is an important festival in the Shravan Masa. This festival is celebrated by the papers, especially the papers.
ವರಗಳನ್ನು ಕೊಡುವ ಲಕ್ಷ್ಮಿ: "ವರ" ಎಂದರೆ ವರಗಳನ್ನು ಅಥವಾ ಇಷ್ಟಾರ್ಥಗಳನ್ನು ಈಡೇರಿಸುವುದು. ಈ ದಿನ ವರಮಹಾಲಕ್ಷ್ಮಿಯನ್ನು ಪೂಜಿಸುವುದರಿಂದ ಸಮಸ್ತ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ.
Lakshmi: "groom" means giving giving gifts. It is believed that worshiping Varamahalakshmi on this day will fulfill all the wishes.
ಅಷ್ಟಲಕ್ಷ್ಮಿಯರ ಅನುಗ್ರಹ: ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವುದರಿಂದ ಅಷ್ಟಲಕ್ಷ್ಮಿಯರಾದ ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಸೌಭಾಗ್ಯಲಕ್ಷ್ಮೀ, ಸಂತಾನಲಕ್ಷ್ಮಿ, ವಿದ್ಯಾಲಕ್ಷ್ಮಿ, ವಿಜಯಲಕ್ಷ್ಮಿ, ಕೀರ್ತಿಲಕ್ಷ್ಮಿ ಮತ್ತು ಮೋಕ್ಷ ಲಕ್ಷ್ಮಿ - ಈ ಎಲ್ಲರ ಅನುಗ್ರಹವೂ ಪ್ರಾಪ್ತವಾಗುತ್ತದೆ ಎಂದು ಹೇಳಲಾಗುತ್ತದೆ.
The blessings of the Ashtalakshmi: Varamahalakshmi Vrata is celebrated by the Ashtalakshmi Dhanalakshmi, Grainalakshmi, Soubhagyaalakshmi, Santalakshmi, Vidyalakshmi, Vijayalakshmi, Keerthilakshmi and Moksha Lakshmi.
ಸೌಭಾಗ್ಯ ಮತ್ತು ಸಮೃದ್ಧಿ: ವರಮಹಾಲಕ್ಷ್ಮಿಯು ಸಂಪತ್ತಿನ ಅಧಿದೇವತೆ. ಈ ವ್ರತವನ್ನು ಶ್ರದ್ಧೆಯಿಂದ ಆಚರಿಸುವುದರಿಂದ ಮನೆಯಲ್ಲಿ ಸಂಪತ್ತು, ಸಮೃದ್ಧಿ, ಸೌಭಾಗ್ಯ, ನೆಮ್ಮದಿ ಮತ್ತು ಶಾಂತಿ ನೆಲೆಸುತ್ತದೆ. Sound and prosperity: Varamahalakshmi is the goddess of wealth. Diligence in this vrata will live in the home of wealth, prosperity, good fortune, comfort and peace.
ಪತಿಯ ಶ್ರೇಯಸ್ಸಿಗಾಗಿ: ಈ ಹಬ್ಬವನ್ನು ವಿವಾಹಿತ ಮಹಿಳೆಯರು ತಮ್ಮ ಪತಿಯ ಮತ್ತು ಕುಟುಂಬದವರ ಒಳಿತಿಗಾಗಿ, ಆಯುಷ್ಯ, ಆರೋಗ್ಯ ಮತ್ತು ಐಶ್ವರ್ಯ ವೃದ್ಧಿಗಾಗಿ ಆಚರಿಸುತ್ತಾರೆ.
This festival is celebrated for the benefit of their husband and family, life, health and riches.
ಪೌರಾಣಿಕ ಹಿನ್ನೆಲೆ: ದೇವತೆಗಳು ಮತ್ತು ರಾಕ್ಷಸರು ಅಮೃತಕ್ಕಾಗಿ ಸಮುದ್ರ ಮಂಥನ ಮಾಡಿದಾಗ, ಲಕ್ಷ್ಮೀದೇವಿ ಕ್ಷೀರಸಾಗರದಿಂದ ಉದ್ಭವಿಸಿದಳು ಎಂಬ ನಂಬಿಕೆ ಇದೆ. ಈ ವ್ರತದ ಬಗ್ಗೆ ಶಿವನು ಪಾರ್ವತಿ ದೇವಿಗೆ ತಿಳಿಸಿದ್ದಾನೆ ಎಂದು ಹೇಳಲಾಗುತ್ತದೆ.It is believed that Lakshmi Devi arose from the Milky Way when the mythical background: Goddesses and demons marched for Amrita. It is said that Lord Shiva had told Goddess Parvati about this vrata.
ಹಬ್ಬದ ಆಚರಣೆ:Festive Celebration:
ಈ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆಯ ಹಿಂದಿನ ಶುಕ್ರವಾರ ಅಥವಾ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಆಚರಿಸಲಾಗುತ್ತದೆ.The festival is celebrated on the second Friday of the Shravan month or the second Friday of the Shravan month.
ಈ ದಿನ ಉಪವಾಸವಿದ್ದು, ಮನೆಯನ್ನು ಸ್ವಚ್ಛಗೊಳಿಸಿ, ಬಾಳೆ ಕಂದು ಮತ್ತು ಮಾವಿನ ತೋರಣಗಳಿಂದ ಅಲಂಕರಿಸಲಾಗುತ್ತದೆ.Today is fasting, the house is cleaned and decorated with banana brown and mango swag.
ಕಲಶವನ್ನು ಸ್ಥಾಪಿಸಿ, ಅದರಲ್ಲಿ ಅಕ್ಕಿ, ನೀರು, ಅರಿಶಿಣ, ಅಡಿಕೆ ಇತ್ಯಾದಿಗಳನ್ನು ಹಾಕಿ, ತೆಂಗಿನಕಾಯಿ ಮತ್ತು ಲಕ್ಷ್ಮೀದೇವಿಯ ಮುಖವಾಡವನ್ನು ಇಟ್ಟು ಪೂಜಿಸಲಾಗುತ್ತದೆ.Install the kalasha, it is worshiped with rice, water, turmeric, nut, etc., a mask of coconut and Lakshmi Devi.
ಹೂವುಗಳು, ವಿಶೇಷವಾಗಿ ಕಮಲದ ಹೂವು ಮತ್ತು ಬಿಲ್ವಪತ್ರೆಯಿಂದ ದೇವಿಯನ್ನು ಪೂಜಿಸಲಾಗುತ್ತದೆ.The Goddess is worshiped by flowers, especially the lotus flower and bilvapatra.
ವಿಧ ವಿಧವಾದ ಸಿಹಿ ತಿಂಡಿಗಳು ಮತ್ತು ನೈವೇದ್ಯಗಳನ್ನು ತಯಾರಿಸಿ ದೇವಿಗೆ ಅರ್ಪಿಸಲಾಗುತ್ತದೆ.A variety of sweets and offers are made and offered to the Goddess.
ಪೂಜೆಯ ನಂತರ ಮುತ್ತೈದೆಯರನ್ನು ಮನೆಗೆ ಕರೆದು ಅವರಿಗೆ ಅರಿಶಿನ, ಕುಂಕುಮ, ಬಳೆ ಮತ್ತು ತಾಂಬೂಲ ನೀಡಿ ಗೌರವಿಸಲಾಗುತ್ತದೆ.After the puja, the grandparents are called home and they are honored with turmeric, saffron, bangle and tambul.



